OSAAT Poem

This is a Kannada poem written by Ramesh K, an OSAAT friend and supporter. At the bottom of the poem is a translated summary of the same. 

ಕಟ್ಟುವೆವು ನಾವು ಹೊಸ ಶಾಲೆಯೊಂದನು,

ವಿದ್ಯೆಗೆ ಹೊಸ ಗೂಡೊಂದನು…

ಮಕ್ಕಳೆಲ್ಲರ ಕನಸು ಕಮರುವ ಮುನ್ನ,

ಓದಿನ ವಯಸು ಮೀರುವ ಮುನ್ನ,

ನಮಗಿನ್ನು ಓದುವ ಭಾಗ್ಯವಿಲ್ಲೆಂದು

ಅವರೆಂದುಕೊಳ್ಳುವ ಮುನ್ನ,

ಕಟ್ಟುವೆವು ನಾವು ಹೊಸ ಶಾಲೆಯೊಂದನು,

ವಿದ್ಯೆಗೆ ಹೊಸ ಸ್ಕೂಲೊಂದನು…

ಓದುವ ಮನಸುಗಳಿಗೊಂದು ಕೊಡುಗೆ,

ಮಕ್ಕಳು ಹೊರಟಿದ್ದಾರೆ ವಿದ್ಯಾಲಯದ ಕಡೆಗೆ,

ಓದಿ ಬರೆಯುವುದಕ್ಕೆ ಅವರಲ್ಲೀಗ ಹೆಚ್ಚು ಉತ್ಸಾಹ,

ಕೊಡುತ್ತಿದ್ದಾರೆ ಗೆಳೆಯರು ಅವರಿಗೆ ಪ್ರೋತ್ಸಾಹ,

ಅವರಿಗಲ್ಲಿಲ್ಲ ಈಗ ಯಾವುದೇ ಕೊರತೆ,

ಅವರ ಗಮನವೆಲ್ಲ ಈಗ ವಿದ್ಯೆಯ ಕುರಿತೆ…

ಆಟ ಪಾಠ ಓಟದಲ್ಲಿ ಮಕ್ಕಳೀಗ ಲೀನ,

ಸಮಾಜ, ಗಣಿತ, ವಿಜ್ಞಾನದೆಡೆಗೆ ಈಗ ಅವರ ಜ್ಞಾನ,

ಮಕ್ಕಳಲ್ಲೀಗ ಓದುವ ಉತ್ಸಾಹ ಎಷ್ಟಾಗಿದೆ ನೋಡಿ,

ಇದು ನಮ್ಮ “ಒಸ್ಯಾಟ್” ತಂಡದ ಮೋಡಿ….

ಇಂತಹ “ಒಸ್ಯಾಟ್” ದಾನಿಗಳಿಗೆ ನಮನ ನಮ್ಮಿಂದ,

ಸಾವಿರಾರು ಮಕ್ಕಳ ಬಾಳು ಬೆಳಗುತಿದೆ ನಿಮ್ಮಿಂದ…

ಕಟ್ಟುವೆವು ನಾವು ಹೊಸ ಶಾಲೆಯೊಂದನು,

ವಿದ್ಯೆಗೆ ಹೊಸ ಗೂಡೊಂದನು.

– ರಮೇಶ್ ಕೆ

Kaṭṭuvevu nāvu hosa śāleyondanu,

vidyege hosa gūḍondanu…

Makkaḷellara kanasu kamaruva munna,

ōdina vayasu mīruva munna,

namaginnu ōduva bhāgyavillendu

avarendukoḷḷuva munna,

kaṭṭuvevu nāvu hosa śāleyondanu,

vidyege hosa skūlondanu…

Ōduva manasugaḷigondu koḍuge,

makkaḷu horaṭiddāre vidyālayada kaḍege,

ōdi bareyuvudakke avarallīga heccu utsāha,

koḍuttiddāre geḷeyaru avarige prōtsāha,

avarigallilla īga yāvudē korate,

avara gamanavella īga vidyeya kurite…

Āṭa pāṭha ōṭadalli makkaḷīga līna,

samāja, gaṇita, vijñānadeḍege īga avara jñāna,

makkaḷallīga ōduva utsāha eṣṭāgide nōḍi,

idu nam’ma”OSAAT” taṇḍada mōḍi….

Intaha”OSAAT” dānigaḷige namana nam’minda,

sāvirāru makkaḷa bāḷu beḷagutide nim’minda…

Kaṭṭuvevu nāvu hosa śāleyondanu,

vidyege hosa gūḍondanu.

– Ramesh K